`ಚಂದ್ರಿಕ` ಸೀಡಿ ಬಿಡುಗಡೆ
Posted date: 21 Tue, Jul 2015 – 10:39:19 AM

ಫ಼್ಲೈಯಿಂಗ್  ವೀಲ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಆಶಾ ಅವರು ನಿರ್ಮಿಸುತ್ತಿರುವ ‘ಚಂದ್ರಿಕ ಚಿತ್ರದ ಹಾಡುಗಳ ಸೀಡಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಗುಣವಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಪ್ರಥಮಪ್ರತಿ ಸಿದ್ದವಾಗುತ್ತಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಜೆ.ಕೆ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಕಾಮನ ಜೇಠ್ಮಾಲನಿ, ಶ್ರೀಮುಖಿ, ಗಿರೀಶ್ ಕಾರ್ನಾಡ್, ಎಲ್.ಬಿ.ಶ್ರೀರಾಂ, ಉದಯ್, ಚಿಕ್ಕಣ್ಣ, ರಮೇಶ್ ಮುಂತಾದವರಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಯೋಗೇಶ್ ನಿರ್ದೇಶಿಸುತ್ತಿದ್ದಾರೆ. ಕವಿರಾಜ್, ಕರುಣಾಕರ್, ರಘುಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ನಾಗೇಶ್ವರರಾವ್ ‘ಚಂದ್ರಿಕ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಕೆ.ರಾಜೇಂದ್ರಬಾಬು ಛಾಯಾಗ್ರಹಣ, ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ನಾಗು ಕಲಾ ನಿರ್ದೇಶನ ಹಾಗೂ ವೇಣುಪಾಲ್, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed